ಬುಧವಾರ, ನವೆಂಬರ್ 23, 2022

ಹರಿವ ನೀರ ತಡೆದಿಟ್ಟ ಮನುಜ
ತನುವ ಪೋಷಣೆಗಿಟ್ಟ ಈ ಜೀವಜಲವನು
ಬೆಟ್ಟ ಕೊರೆದು ಬಗೆದ ಖನಿಜ 
ಸೌಂದರ್ಯ ಜೀವನಕ್ಕಾಗಿ ಪಡೆದನು

ಹಾಗಾದರೆ ಪರಿಸರದ ಸೃಷ್ಟಿ ಯಾಕಾಯಿತು? ... ಎಂದರೆ ಇವನೆಂದ 'ಇದೆಲ್ಲವೂ ತನಗಾಗಿ ತನ್ನ ಹಿತಕ್ಕಾಗಿ.. ತನ್ನ ಸುಖಕ್ಕಾಗಿ'...
ಹಾಗಾದರೆ ಬದುಕು ಮತ್ತು ಪರಿಸರ ಸಂಬಂಧ ಇಷ್ಟೇನಾ..!? ಪರಿಸರದಿಂದ ಬದುಕು ಹೊರತು ಬದುಕಿಗಾಗಿ ಪರಿಸರವೇ..? ಪರಿಸರ ಎಂದರೆ ಕೇವಲ ಹಸಿರು ಮಾತ್ರಾನ..? ಪ್ರಾಣಿ ಮತ್ತು ಜಂತುಗಳಲ್ಲಿ ಮನುಷ್ಯ ಇಲ್ಲವೇ..?!🙄

 ಒಟ್ಟಿನಲ್ಲಿ ಮಳೆ ಬಂದು ಇಳೆ ತಂಪಾದಾಗ ಆಹಾರ, ಧಾನ್ಯ ಜೊತೆಗೆ ಸ್ನಾನ ಹಾಗೂ ಬಾಯಾರಿಕೆಗಾಗಿ ನೆಲ ಜಲವ ಪಡೆದ.. ಇದು ವಾಸ್ತವ ಮತ್ತು ಬಳಕೆಯ ನುಡಿ.
ತನ್ನ ಮನದ ತಂಪಿಗಾಗಿ ಪರಿಸರವನು ಮನಬಂದಂತೆ ಕೆತ್ತಿದನು, ಮೆತ್ತಿದನು ಅಲ್ಲೇ ಜೀವನ ಕಳೆದನು.. ಕಳೆಯದಿದ್ದವನು ಸಮಯದ ಮುಳ್ಳಿನ ಜೊತೆ ಸುಖವನ್ನು ಅಲ್ಲೇ ಹುಡುಕ ತೊಡಗಿದನು.. ಉಗಿದನು, ಉರುಳಿದನು, ಕೊಂದನು,  ತಿಂದನು, ಬೀಸಾಕಿದನು ಮತ್ತೆ ಅಲ್ಲೇ ತನ್ನೆಲ್ಲ ನೋವನ್ನು ಬಿಟ್ಟು ಅದರ ಖುಷಿಯನ್ನು ನುಂಗಿದನು...

        ಇನ್ನು ತನ್ನ ಅನುಕೂಲ ಮತ್ತು ಸೌಂದರ್ಯ ಜೀವನಕ್ಕಾಗಿ ಪರಿಸರವನ್ನು ಒಡೆದ, ಬಗೆದ ಸಿಕ್ಕವುಗಳೆಲ್ಲ ತನಗಾಗೆ ಎಂದು ಭಾವಿಸಿದ...! ಅಷ್ಟಕ್ಕೇ ಸುಮ್ಮನಿರುವನೇ.. ತನುವಿನ ಸೌಂದರ್ಯಕ್ಕೂ ಇದರ ನಾಶದಿಂದ ಸಿಗುವ ವಸ್ತುಗಳೇ ಸಾಕೆಂದ...!
ಹಾಗಾದರೆ ಮನುಷ್ಯನಿಗೆ ಬದುಕಲು ಬೇಕಾದ ಸಹಜ ಆಹಾರ, ಸಹಜ ಸೌಂದರ್ಯ, ಸಹಜ ವಾತಾವರಣ, ಗಾಳಿ, ಸಹಜ ಪ್ರಾಣಿಗಳ ಸಂಬಂಧ ಯಾಕೆ ಬೇಡವಾಯಿತು..!? ಎಲ್ಲವು ಹೈಬ್ರಿಡ್ ಎಂಬ ಹಣೆಪಟ್ಟಿಯಲ್ಲೇ ಪರಿಸರದ ಮೇಲಿನ ಅತ್ಯಾಚಾರಗಳು, ಪ್ರಾಣಿ ಮತ್ತು ಸಸ್ಯಗಳ ಮೇಲಿನ ಪ್ರಯೋಗಗಳು ಮನುಷ್ಯನ ಅವನತಿಯನ್ನು ಬಯಸಲಾರವೇ..?
ಹಾಗಾದರೆ ಈ ಪರಿಸರದ ಪ್ರೇರಣೆಯಿಂದಲೇ ಮನುಷ್ಯನ ವರ್ತನೆಗಳಲ್ಲಿ ಕೆಲವೊಂದು ಬದಲಾವಣೆಗಳಾಗಿವೆಯೇ..?
ಮನುಷ್ಯನಲ್ಲೇ ಕೆಲವೊಂದು ಸ್ವನಾಶ ಪ್ರವೃತ್ತಿ ಹೆಚ್ಚಾಗಳು ಈ ಪ್ರಕೃತಿಯ ಭಾವದ ಏರುಪೇರಲ್ಲಾದ ಸೂಚನೆಗಳೇ.. ಕೋಪ, ಉದ್ರೇಕ, ಅಸಹನೆ, ಅಸ್ಮಿತೆಯ ಮೌಡ್ಯ, ಮತಾಂಧತೆ, ರೋಗ, ಕುಗ್ಗುವಿಕೆ, ತುಲನೆ, ಲಾಲಾಸೆ, ಲಾಭ, ಅಪವಾದ, ಅನ್ಯಾಯ, ಒತ್ತಡ, ಹಿಂಸೆ ಇತ್ಯಾದಿಗಳು..!

ಎಲ್ಲ ಪ್ರಶ್ನೆಗಳಿಗೂ ಉತ್ತರ ಮತ್ತು ಉತ್ತರದಾಯಿತ್ವ ಕೇವಲ ಮನುಷ್ಯನ ಬದುಕುವ ಶೈಲಿಯೇ ಕೊಡಬೇಕೇನೋ.. ಚಲಿಸೋಣ ಅಸ್ತಿತ್ವ ರಹಿತ ಅಸ್ಮಿತೆ ಮತ್ತು ಆಸೆಯ ಸುಖದ ಅಭಿವೃದ್ಧಿಯ ಜೀವನದ ಕಡೆಗೆ.. ಶುಭವಾಗಲಿ !

ಭಾನುವಾರ, ಜನವರಿ 5, 2020

ಅತಿರೇಕದ ಭಕ್ತಿ ಮನುಷ್ಯನನ್ನು ಅಹಂಕಾರಕ್ಕೆ ದೂಡುತ್ತದೆ ಜೊತೆಗೆ ಮದವೇರಿಸುತ್ತದೆ. ಹಲವು ಋಷಿಗಳನ್ನು ಕೋಪ ಮತ್ತು ಅಹಂಕಾರ ಸಾಧನೆಯ ನಂತರ ಆವರಿಸಿ ಸಾಧನೆಯನ್ನು ಶೂನ್ಯ ಮಾಡಿ ಮತ್ತೆ ತಪ್ಪಿನ ಅರಿವು ಮೂಡಿದ್ದು ಪೌರಾಣಿಕ ಹಾಗೂ ಐತಿಹಾಸಿಕ ಕಥೆಗಳಲ್ಲಿ ಓದಿದ್ದೇವೆ. ಇವತ್ತು ಏಕ ನಾಯಕತ್ವದಲ್ಲಿ  ಉತ್ತಮ ಕಾರ್ಯವನ್ನು ಸಮರ್ಥಿಸುವ ಭರದಲ್ಲಿ ಕುರುಡ ವಿಚಾರಗಳನ್ನು ತುಂಬುವಷ್ಟು ಅಂಧರಾಗಿರುವವರು, ಅನಗತ್ಯವಾಗಿ ಲೆಕ್ಕಕ್ಕಿಂತ ಹೆಚ್ಚು  ಪ್ರಚಾರ ಮಾಡಿ ಇತರರ ಮನೋಭಾವವನ್ನು ಹೀಯಾಳಿಸುವವರು ನಿಜಕ್ಕೂ ದೇಶದ ಪ್ರಧಾನಿ ಹಾಗೂ ಸಂವಿಧಾನಕ್ಕೆ ಅಪಚಾರ. ಅಲ್ಲದೇ ಇವರಿಗೆ ವ್ಯಕ್ತಿ ದೇವರಾದರೆ ಇನ್ನೊಬ್ಬರಿಗೆ ಪ್ರಕೃತಿ ದೇವರು, ಕಾನೂನು ದೇವರಾಗಬಹುದು ಇನ್ನೊಬ್ಬರಿಗೆ ಚಿಂತನೆ ದೇವರಾಗಬಹುದು.. ವ್ಯಕ್ತಿ ಪೂಜೆಯನ್ನು ಯಾವ ಸಂಘಟನೆಯ ತತ್ವವು ಒಳಗೊಂಡಿಲ್ಲ. ಸ್ವತಃ ಬಸವಣ್ಣನವರು ವಿರೋದಿಸಿದರು ಆದರೂ ಅವರನ್ನೆ ಪೂಜಿಸಿದರು, ಆಚರಣೆಯ ಮೌಢ್ಯವನ್ನು ವಿರೋಧಿಸಿದರು ಆ ವಿರೋಧದ ಲಾಭದಲ್ಲಿ ಅನುಯಾಯಿಗಳು ಇನ್ನೊಂದು ಮೌಢ್ಯ ಸೃಷ್ಟಿಸಿದರು. ಹೀಗೆ ನಾವೆಲ್ಲರೂ ಇಟ್ಟುಕೊಂಡಿರುವ ಆದರ್ಶ, ನಂಬಿಕೆ, ವಿಚಾರಗಳನ್ನು ನಮ್ಮ ಅಂತರ್ಯದಲ್ಲಿ ಇಟ್ಟುಕೊಳ್ಳದೆ ಹೃದಯದಲ್ಲಿ ಪೂಜಿಸದೆ ಸಾಂಸ್ಥಿಕವಾಗಿ ಹೊರಗಡೆ ಎಸೆದು ಗಲೀಜು ಮಾಡಿ, ದ್ವೇಷದಿಂದ ಇನ್ನೊಬ್ಬರು ಒಪ್ಪಿಕೊಳ್ಳಲೆಬೇಕು ಎಂಬ ಹಠದಲ್ಲಿದ್ದೇವೆ. ನಾನು ನನ್ನನ್ನೆ ಅರ್ಥ ಮಾಡಿಕೊಳ್ಳಲು ಪ್ರಯತ್ನ ಪಡುವುದರ ಬದಲು ಇನ್ನೊಬ್ಬನಿಗೆ ನನ್ನ ಒಪ್ಪಿತ ಎಲ್ಲವನ್ನು ಹೇರುವ ಅಧಿಕಾರ ನನಗಾರು ನೀಡಿದರು ಎನ್ನುವುದೇ ತಿಳಿದಿಲ್ಲ. ಆದರೊ ಪ್ರಜಾಪ್ರಭುತ್ವದ ರಾಷ್ಟ್ರದಲ್ಲಿ ನನ್ನ ಆಯ್ಕೆಯ ಮಿತಿ ಸಂವಿಧಾನದ ಅಶಯವನ್ನು ಮೀರಿದಾಗ ಜೆ ಜೆ ರೂಸೋ ನ ಜನತಾ ಪರಮಾಧಿಕಾರದಂತೆ ಬಹುತ್ವದ ನೆಲೆಯಲ್ಲಿ  ಕಾನೂನಿನ ಮೂಲಕ ನಿಯಂತ್ರಿಸಬಹುದು. ಆದರೆ ಜೆ ಎಸ್ ಮಿಲ್ ನ ಒಬ್ಬ ವ್ಯಕ್ತಿಯ ಆಶಯವನ್ನು ಮರೆಯುವಂತಿಲ್ಲ. ಕೃಷ್ಣ ಹೇಳುತ್ತಾನೆ "ನಿನ್ನನ್ನು ನಿಯಂತ್ರಿಸಬಲ್ಲೆ ಆದರೆ ನೀನು ಕೋಪ ಹಾಗೂ ಅಹಂಕಾರ ಭರಿತನಾದಾಗ ಸಾಧ್ಯವಿಲ್ಲ. ನೀನು ನನ್ನನ್ನು ಮರೆತಿರುವೆ." ಎಲ್ಲವನ್ನೂ ಪ್ರೀತಿಸುವ ಗುಣ ಎಲ್ಲರನ್ನು ಒಳಗೊಳ್ಳುವ ಗುಣ ಅಪರೂಪ. ಅವರು ಅರ್ಥ ಮಾಡದಿದ್ದರೆ ವಿವರಿಸಿ ಹೇಳುವುದು ಉತ್ತಮ.ಅವರು ಅರಿತು ತರ್ಕ ಬದ್ಧವಾಗಿ ವಿಚಾರ ಮಂಡಿಸುವಾಗ ಕೇಳಿದ ನಂತರ, ಮತ್ತೂ ತಮ್ಮ ವಿಚಾರ ಹೇಳಬೇಕು ಅನಿಸಿದರೆ, ಹೀಗೂ ಇರಬಹುದಲ್ಲವೆ ಯೋಚಿಸಿ ಎಂದು ತೆರಳುವುದು ಒಳಿತು. ಒಟ್ಟಿನಲ್ಲಿ ಇನ್ನೊಬ್ಬರನ್ನು ನೀನು ಹೀಗೆ ಮಾಡು ಎಂದು ಹೇಳುವ ವ್ಯಕ್ತಿ ತನ್ನ ಅಸ್ತಿತ್ವ ಗಟ್ಟಿ ಇದೆಯಾ ನೋಡಬೇಕು. ಬದಲಾಯಿಸುತ್ತೇನೆ, ಹಿಂಸೆ ಮಾಡುತ್ತೇನೆ , ನನ್ನ ನಂಬಿಕೆ ಶ್ರೇಷ್ಠ  ಎಂದವರಾರು ಇವತ್ತಿಗೂ ಶಾಶ್ವತವಾಗಿ ಈ ಜಗತ್ತಿನಲ್ಲಿ ಉಸಿರಾಡುತ್ತಿಲ್ಲ. ಸಮಯ ಬಂದಾಗ ಎಲ್ಲಿ ಯಾರೂ, ಯಾವಾಗ ಹೋಗಬೇಕು, ಎಲ್ಲಿಗೆ ಹೋಗುತ್ತೇವೆ ಎಂಬುದು ಯಾರಿಗೂ ಗೊತ್ತಿಲ್ಲ. 
 -ಪೃಥ್ವಿರಾಜ್ ಗಂಗೋತ್ರಿ

ಶನಿವಾರ, ಅಕ್ಟೋಬರ್ 19, 2019

ದೇವರನ್ನು ಕಾಡಿದ ಮನುಜನ ಮರ್ಕಟ ಮನಸ್ಸು



    ದ್ವಾಪರದಲ್ಲಿ ಕೃಷ್ಣ ದೇವರೆಂದು ತಿಳಿದಿದ್ದರೂ,ಕಂಸನ ಕೃಷ್ಣ ಕೊಂದ ಕೋಪದ ಪ್ರತಿಕಾರಕ್ಕೆ ಜರಾಸಂದ ದ್ವಾರಕದ ಮೇಲೆ ದಂಡೆತ್ತಿ ಬಂದಾಗ ಎರಡು ಆಯ್ಕೆ ದ್ವಾರಕ ರಾಜನಿಗೆ ನೀಡುತ್ತಾನೆ. ಅದೆಂದರೆ ಕೃಷ್ಣನನ್ನು ಕಳುಹಿಸಿದರೆ ದ್ವಾರಕ ನಾಶ ಮಾಡದೆ ಕೃಷ್ಣನನ್ನು ಮಾತ್ರ  ಸಂಹರಿಸಿ ತೆರಳುವುದು ಮತ್ತೊಂದು ಕೃಷ್ಣನನ್ನು ದ್ವಾರಕದಿಂದ ಒಪ್ಪಿಸದಿದ್ದರೆ ಇಡೀ ದ್ವಾರಕ ನಾಶ. ಇದನ್ನು ಕೇಳಿದ ರಾಜ ಕಂಗಲಾಗಿ ರಾಜ ಸಭೆ ಕರೆದು ಎಲ್ಲ ಹಿರಿಯೊತ್ತಮರ ಅಭಿಪ್ರಾಯ ಪಡೆದಾಗ ಎಲ್ಲರೂ ಕೃಷ್ಣನಿಗೋಸ್ಕರ ದ್ವಾರಕ ನಾಶ ಆಗೋದು ಬೇಡ. ಕೃಷ್ಣ ದೇವರು ತಾನೆ ಅವನನ್ನು ಅವನೇ ರಕ್ಷಿಸಿಕೊಳ್ಳಲಿ ಎಂದು ನಿರ್ಧಾರಕ್ಕೆ ಬರುತ್ತಾರೆ. ಕೃಷ್ಣ ಬಲರಾಮರಿಬ್ಬರೆ ಸೇರಿ ಜರಾಸಂದನ ಓಡಿಸುತ್ತಾರೆ. ಬಾಲ್ಯದಿಂದ ಮಾಡಿದ ಕೃಷ್ಣಲೀಲೆಯ ಮರೆತ ಜನ ಆ ಸಂದರ್ಭದಲ್ಲಿ ಮತ್ತೆ ಉಘೇ ಉಘೇ ಅಂದರು.
     ಕೌರವರ ರಾಜಸಭೆಯಲ್ಲಿ ಸಂಧಾನಕ್ಕೆಂದು ತೆರಳಿದ ಕೃಷ್ಣನ  ಮೌನಿಯಾದ ರಾಜ ಧೃತರಾಷ್ಟ್ರ ,ದೇವರೆಂದು  ಪೂಜಿಸಿದ ಬೀಷ್ಮ ದ್ರೋಣರೆದುರೆ  ಖಂಡಾತುಂಡವಾಗಿ ನಿಂದಿಸಿದ ದುರ್ಯೋಧನನ ಆಜ್ಞೆಯಂತೆ ಬಂಧಿಸಲು ಕೌರವ ಮಂತ್ರಿಗಳು ಮುಂದೆ ಬಂದಾಗ ವಿಷ್ಣು ರೂಪಾ ತಾಳಿದಾಗಲೂ ಭಗವಂತನೆಂದು ತಿಳಿಯದ ಮೌಢ್ಯ.
        ಇಂದ್ರಪ್ರಸ್ಥದಲ್ಲಿ ಧರ್ಮರಾಯನಿಗೆ ಪಟ್ಟಾಭಿಷೇಕ ನಡೆಯುವಾಗ ಮೊದಲ ಪೂಜೆ ಕೃಷ್ಣನಿಗೆ ನೀಡಲಾಗುತ್ತದೆ.ಇದನ್ನು ವಿರೋಧಿಸಿ ಶಿಶುಪಾಲ ನೀಚ,ಕಾಮುಕ,ತಂದೆ ತಿಳಿಯದವ, ನೀಚ ಕುಲದ ಗೋಪಾಲಕನೆಂದು ನೂರು ಶಬ್ದಗಳನ್ನು ಮೀರಿ ದಾಟಿದಾಗ ಕೃಷ್ಣನೆ ವಧೆ ಮಾಡಬೇಕಾಯಿತು. ನೂರು ಶಬ್ದಗಳವರೆಗೆ ಕೊಲ್ಲುವುದಿಲ್ಲವೆಂದು ಶಿಶುಪಾಲನ ತಾಯಿಗೆ ನೀಡಿದ ವಾಗ್ದಾನ ಮುಗಿಯುವವರೆಗೆ ಕಾಯಬೇಕಾಯಿತು.
         ಕೃಷ್ಣ ಭಗವಂತನೆಂದು ಕೌರವನು ತಿಳಿದರೂ ಕೂಡ ಅವನ ಸೈನ್ಯವೇ ಸಾಕು ನಮ ಪಾಲಿಗೆ. ಕೃಷ್ಣ ಒಬ್ಬ ಮಾತ್ರ ಪಾಂಡವರಿಗೆ ಇರಲಿ ಎಂದು ಸಾಮಾನ್ಯನಂತೆ ಕೃಷ್ಣನನ್ನು ನಡೆಸಿಕೊಂಡನು.
      ಕರ್ಣ ನಿನ್ನ ಸಹೋದರರ ಕೈಯಲ್ಲಿ ನೀನು ಸಾಯಬೇಡ ನೀನು ಕುಂತಿ ಮಗನೆ ಎಂಬ ಸತ್ಯ ಹೇಳಿದಾಗಲೂ ನಾಳೆ ನಡೆಯುವ ಯುದ್ಧವನ್ನು ತಡೆಯುವ ಉದ್ದೇಶದಿಂದ ಬಂದಿರುವೆ ಎಂದು ಕೊನೆ ಮಾತುಕತೆವರೆಗೆ ಕೃಷ್ಣನ ನಂಬುವುದಿಲ್ಲ ಕರ್ಣ. ಕುಂತಿಯನ್ನೇ ಹೋಗಿ ಕೇಳುವವರೆಗೆ ಕರ್ಣನಿಗೆ ನಂಬಿಕೆ ಹುಟ್ಟಲಿಲ್ಲ.
         ಧರ್ಮದ ಮಾರ್ಗದ ಎದುರು ಅಧರ್ಮದ ಗೆಲುವಿಗಾಗಿ ಯುದ್ಧಕ್ಕೆ ನಿಂತವರು ಅಧರ್ಮಿಗಳು ಕೊಂದು ಬಿಡು ಎಂದಾಗ ಕೃಷ್ಣನ ಮಾತನ್ನು ಯುದ್ಧರಂಗದಲ್ಲಿ ಅರ್ಜುನ ಸಂಬಂಧಿಕರು, ಗುರುಗಳು ಎಂದು ನಿರಾಕರಿಸುತ್ತಾನೆ. ಕೃಷ್ಣನ ಬೋಧನೆ ನಂತರ ಅರ್ಜುನ ಎಚ್ಚೆತ್ತುಕೊಳ್ಳುತ್ತಾನೆ.
       ತನ್ನ ಮಕ್ಕಳಾದ ಪಂಚ ಪಾಂಡವರನ್ನು ಕೊಂದ ಕೋಪದಲ್ಲಿ ಕೃಷ್ಣನ ಮಾತನ್ನು ದಿಕ್ಕರಿಸಿ, ಅಶ್ವತ್ತಾಮನ ಕೊಲ್ಲಲು ಪಾಂಡವರನ್ನು ದ್ರೌಪದಿ ಕಳುಹಿಸುತ್ತಾಳೆ. ಪಾಂಡವರ ಸಾವನ್ನು ತಪ್ಪಿಸಲು ಹಿಂದೆ ತನ್ನ ರಥವನ್ನು ಸಾಗಿಸಿ ಶಿವನ ಅಂಶವಾದ ಅಶ್ವತ್ತಾಮನು ಅಧರ್ಮದ ಸೇಡಿಗಾಗಿ ಬಳಸಿದ ಬ್ರಹ್ಮಾಸ್ತ್ರವನ್ನು ಬ್ರಹ್ಮ ದೇವರ ಪ್ರಾರ್ಥನೆಯೊಂದಿಗೆ ಹಿಂದಕ್ಕೆ ಪಡೆಯುವಂತೆ ಕೃಷ್ಣ  ಮಾಡುತ್ತಾನೆ.

      ಕೃಷ್ಣ ತಾನು ಭಗವಂತ ಎಂದು ಗೊತ್ತಿದ್ದರೂ ದ್ವಾಪರದಲ್ಲಿ ಮನುಷ್ಯ ಆತನ ಲೀಲೆಗಳನ್ನು ಮಾತ್ರ ಮೆಚ್ಚಿದ ಹೊರತು ತನ್ನ ಮನಸ್ಸಿನ ಮರ್ಕಟ ಬುದ್ಧಿಯಿಂದಲೇ ಕೃಷ್ಣನ ಆಪಾದಿಸಿದರು, ಆತನ ಮಾತನ್ನು ನಿರಾಕರಿಸಿದರು.ಕೃಷ್ಣ ಸಾಮಾನ್ಯನಂತೆ ಎಲ್ಲವನು ಅನುಭವಿಸಿದ ಜೊತೆಗೆ ತಾನೆ ಅದಕ್ಕೆ ಪರಿಹಾರ ಕಂಡುಕೊಂಡನು. ಒಂದುವೇಳೆ ಅದೇ ಭಗವಂತ ಕಲಿಯುಗದಲ್ಲಿ ಜನಿಸಿದರೆ ಅಂದು ನೂರು ಇವತ್ತು ಲಕ್ಷಾಂತರ ಮಂದಿಯ ಆಪಾದನೆಗಳನ್ನು ಎದುರಿಸಬೇಕಾದಿತು. ಭಜನೆ, ಪೂಜೆ, ಹೋಮ, ಹವನ ಮಾಡಿಸುವವರು, ಮಾಡದವರು, ನಂಬದವರು , ನಂಬುವವರು ಹಾಗೂ ದೇವಸ್ಥಾನಗಳನ್ನು ಬಂಗಾರದಿಂದ ತುಂಬುವವರು ಕೃಷ್ಣ ಎದುರು ಬಂದರೂ, ನಾನೇ ದೇವರೆಂದರೂ ದ್ವಾಪರದಲ್ಲಿ ಬಿಡದ ಮನುಷ್ಯ ಕಲಿಯುಗದಲ್ಲಿ ಬಿಡುವನೆ!..

ಮಂಗಳವಾರ, ಜನವರಿ 15, 2013

ಇದು ಕೂಡ ಎಂ.ಎ ವ್ಯಾಸಂಗದ ಅವಧಿಯಲ್ಲಿ ಬರೆದಿರುವಂತ ಸಣ್ಣ ಲೇಖನ...

ಶೀರ್ಷಿಕೆ ನಾನು ಎಂ . ಎ ನಲ್ಲಿ ಇರುವಾಗ ಬರೆದ ಲೇಖನ ಹೊಸದಿಗಂತ ದೈನಿಕದಲ್ಲಿ ಮುಖ್ಯ ಲೇಖನವಾಗಿ ಬಂದಿದ್ದು. ಸೇರಿಸಿ

ಮಂಗಳವಾರ, ಡಿಸೆಂಬರ್ 25, 2012

ಗಾಂಧಿ ಮತ್ತು ವಿಚಾರ ವಿಮರ್ಶೆಯಲ್ಲಿ ಗಾಂಧಿವಾದ

         ಗಾಂಧಿಯ ಜೀವನವೇ ಒಂದು ತಪಸ್ಸು. ರೂಪ ಮತ್ತು ಅನುಭವದಲ್ಲಿ ಸತ್ಯದ ನಿಷ್ಕರ್ಷೆ ಅಗತ್ಯ. ಗಾಂಧೀಜಿಯವರು ಸಾಮಾನ್ಯ ಮನುಷ್ಯನಾಗಿದ್ದು, ಪ್ರಯೋಗಾತ್ಮಕ ಬದುಕನ್ನು ರೂಪಿಸುವ ಮೂಲಕ ಸಾಧಕರಾದರು. ಅಪರಿಪೂರ್ಣ ಶರೀರದಲ್ಲಿ ಸತ್ಯ ಶೋಧನೆಯ ಪ್ರಯೋಗ ಕ್ಲಿಷ್ಟಕರವಾದುದು. ಆದರೆ ಸಮಾಜವನ್ನು ಶೋಧನೆಗೆ ಒಳಪಡಿಸಿದಾಗ ರೂಪ ಮತ್ತು ಅನುಭವಗಳ ಪ್ರಯೋಗಾತ್ಮಕ ಸಾರವೇ ಶುದ್ಧ ಜನಾಭಿಪ್ರಾಯ. ಈ ಅಭಿಪ್ರಾಯಕ್ಕೆ ಮೂಲ ಗಾಂಧೀಯು ಬಿತ್ತರಿಸಿದ ಮೌಲ್ಯಗಳು. ಮೌಲ್ಯ ಪ್ರೇರಿತ ಅನುಭವಾತ್ಮಕ ಅಭಿಪ್ರಾಯ ಅದು ಭಾರತೀಯ ಇತಿಹಾಸ ಮತ್ತು ಪುರಾಣಗ್ರಂಥಗಳ ಸತ್ವ. ಅದು ಇಲ್ಲಿನ ಜೀವನದ ರಸ-ವಿರಸಗಳ ಪರಿಧಿ. ಈ ಮೌಲ್ಯದ ಸ್ಪರ್ಶಜ್ಞಾನ ತುಂಬಿದ ಉತ್ಸಾಹದ ಮಾತುಗಳು ಇಡೀ ಭಾರತವನ್ನು ಸ್ವಾತಂತ್ರ್ಯ ಹೋರಾಟದಲ್ಲಿ ಅಣಿಗೊಳಿಸಿದ ರೀತಿ ವಿಭಿನ್ನವಾದುದು. ಲಕ್ಷಾಂತರ ದೇಶಪ್ರೇಮ ಹೊತ್ತ ಹೃದಯಗಳು ಗಾಂಧೀ ಕರೆಗೆ ಸ್ಪಂದಿಸಿತು. ಈ ಮೂಲಕ ಅವರು ಅರಿತಿದ್ದ ಆದರ್ಶಗಳನ್ನು ಲಿಂಗಭೇದವಿಲ್ಲದೆ ಎಲ್ಲರೂ ಒಪ್ಪಿದರು. ತನ್ನ ಜೀವನ ಶೈಲಿಯಲ್ಲಿ ನಿರ್ಧಿಷ್ಟ ಭವಬಂಧನಗಳ ತೊಡಕನ್ನು ನಿವಾರಿಸಿ, ಹೊಸ ಜೀವನ ವಿಧಾನವನ್ನು ಅನ್ವೇಷಣೆ ಮಾಡಿದ ಮಹಾನ್ ಸಾಧಕ. ಜೊತೆಗೆ ಮನಸ್ಸನ್ನು ಕೃಷಿಮಾಡಿ ಜನರಲ್ಲಿ ವರ್ತ-ಭವಿತವ್ಯದ ಕನಸನ್ನು ಇತಿಹಾಸದ ನೆನಪೊಳು ತುಂಬಿದ ಋಷಿ.
            ಗಾಂಧೀಜಿಯವರಿಗೆ ತಮ್ಮ ವೈಚಾರಿಕ ನಿಲುವಲ್ಲಿ ತುಂಬಾ ವಿಶ್ವಾಸವಿತ್ತು. ಈ ಕಾರಣದಿಂದಲೇ ಬದುಕನ್ನು  ವ್ಯವಸ್ಥಿತ ಚೌಕಟ್ಟಿನೊಳಗೆ ರೂಢಿಸಿಕೊಳ್ಳುವ ಅವರ ಕ್ರಮ ತುಂಬಾ ಪರಿಣಾಮಕಾರಿಯಾದುದು. ಗಾಂಧೀಯನ್ನು ವಿಭಿನ್ನ ದೃಷ್ಟಿಕೋನದಿಂದ ಕಂಡವರು 'ತನ್ನ ಗಾಂಧೀ'ಯ ವೈರುಧ್ಯವನ್ನು  ಬರವಣಿಗೆಯಿಂದ  ವಿಶ್ಲೇಷಣೆ ಮಾಡತೊಡಗಿದರು. ಗಾಂಧಿಯನ್ನು ಒಂದು ವೈಚಾರಿಕವಾದದ ನೆಲೆಯಲ್ಲಿ ಅಧ್ಯನ ಮಾಡಿದವರೇ ಹೆಚ್ಚು. ಬಹುತೇಕ ಲೇಖಕರು,ಚಿಂತಕರು, ವಿಮರ್ಶಕರು ಅದು ದೆಶಿಯರೇ ಆಗಿರಲಿ, ಅಲ್ಲ ವಿದೇಶಿಯರೇ ಆಗಿರಲಿ ಗಾಂಧೀ ಒಬ್ಬ ಸಾಮಾನ್ಯ ವ್ಯಕ್ತಿಯಾಗಿ ಅರ್ಥ ಹುಡುಕುವಲ್ಲಿ ವಿಫಲರಾಗುತ್ತೇವೆ. 
            ಗಾಂಧೀ ಎಂಬ ಸಾಮಾನ್ಯ ವ್ಯಕ್ತಿ ವಿಶ್ಲೇಷಣೆಗೊಳಪಟ್ಟಾಗ ಅವರ ವಿಚಾರಗಳನ್ನು ವಿಮರ್ಶೆಯ ವಸ್ತುವಾಗಿ ಸ್ವೀಕರಿಸಬಹುದು. ಈ ಮೂಲಕ ಅಂದಿನ ಪರಿಸರ ಮತ್ತು ಇಂದಿನ ಸನ್ನಿವೇಶಗಳ ಸಾಮಾಜಿಕ  ತುಲನೆಯಿಂದ ಗಾಂಧಿಯನ್ನು ಅರ್ಥೈಸಿಕೊಳ್ಳಬಹುದು. ಅಷ್ಟು ಮಾತ್ರವಲ್ಲ ರಾಜಕೀಯ, ಸಾಂಸ್ಕೃತಿಕ  ಹಾಗು ಆರ್ಥಿಕತೆಯಲ್ಲೋ ಗಾಂಧಿಯನ್ನು ನಾವು ಕಾಣಬಹುದು. ಇದು  ಗಾಂಧೀಯ ವಿಚಾರಧಾರೆಯು ಹಿಂದಿನಿಂದ ಸತ್ಸಂಪ್ರದಾಯವಾಗಿ ಬೆಳೆದು ನಿಂತ ವಿಚಾರಗಳ ಕವಲು ಎಂದು ಅರ್ಥೈಸಲು ಅನುಕೂಲವಾಗುತ್ತದೆ. ಗಾಂಧೀ ತನ್ನ ವೈಯಕ್ತಿಕ ಬದುಕಿನಲ್ಲಿ ಪರಿಚಯಿಸಿ ಸಾಮಾಜಿಕ ಪ್ರಯೋಗಕ್ಕೆ ಮುನ್ನುಡಿ ಹಾಕಿರುವುದು ಇಲ್ಲಿ ವಿಶೇಷ. ಕಾರ್ಯದಲ್ಲಿ ಅರ್ಚಕನ ನಿತ್ಯ ಪೂಜೆಯು ಚಮ್ಮಾರನ ನಿತ್ಯದ ಪ್ರಾಮಾಣಿಕ ಕರ್ತವಯಕೆ ಸಮವೆಂಬ ನಿಲುವು.  ' ಗ್ರಾಮ ಸ್ವರಾಜ್ಯ ' ಬಗ್ಗೆ ಮಾತನಾಡುವಾಗ ಗಾಂಧೀ " ನಗರಗಳು ಗ್ರಾಮಗಳಿಂದಲೇ ಬದುಕುತ್ತಿವೆ, ಅದಕ್ಕಾಗಿ ನಗರವೇ ರಾಷ್ಟ್ರವಲ್ಲ. ಗ್ರಾಮಗಳ ಸಮೂಹವೇ ರಾಷ್ಟ್ರ. ನಾವು ಜಪಾನ್, ಅಮೇರಿಕ,ಇಂಗ್ಲೆಂಡಗಳಿಂದ ಆಮದು ಮಾಡಿಕೊಳ್ಳದೆ ನಮ್ಮ ದೇಶದ ಹಳ್ಳಿಯಲ್ಲೇ ಉತ್ಪಾದನೆ ಮಾಡಿಕೊಳ್ಳಬೇಕು." ಇದು ಗಾಂಧೀಯ ಭವಿಷ್ಯತ್ತಿನ ಆಗ್ರಹವಾಗಿತ್ತು. ಇವುಗಳು ಇತಿಹಾಸದಿಂದ ಗಾಂಧೀ ಅರ್ಥ ಮಾಡಿಕೊಂಡಿರುವ ವಿಚಾರ. ರಾಜಕೀಯ ಮತ್ತು ನ್ಯಾಯಿಕ ವಿಕೇಂದ್ರಿಕರಣವನ್ನು ಬಯಸುವ ಗಾಂಧೀಯ ಜನತಾ ನೋವಿಗೆ ಕಲ್ಯಾಣದ ಔಷದಿ ಹುಡುಕುವ ಪ್ರಯತ್ನವಾಗಿತ್ತು. ಗಾಂಧೀ ಒಂದು ವಾದ ಎನ್ನುವುದಕ್ಕಿಂತ ಗಾಂಧಿಯ ವಿಚಾರ  ಮತ್ತು ಗಾಂಧಿಯ ಸ್ವ- ಸಾಮಾಜಿಕ ಪ್ರಯೋಗಗಳು ಒಂದು ಪರಿವರ್ತನೆಯನ್ನು ತಂದವು ಎನ್ನಬಹುದು. ಗಾಂಧಿ ಶಾಂತಿಯ ಹೊತ್ತ ಧೂತರ ಬದಲಾಗಿ ಪ್ರತಿಪಾದಕರಷ್ಟೇ. ನಾವು ಇನ್ನು ಗಾಂಧಿಯನ್ನು ಹೆಚ್ಚು ಹೆಚ್ಚು ಸ್ವೀಕರಿಸಿ ಅರ್ಥ ಹುಡುಕಬೇಕಾಗಿದೆ. 

ಬುಧವಾರ, ನವೆಂಬರ್ 21, 2012

PÀ£ÀßqÀ ¨sÁµÉ ªÀÄvÀÄÛ ªÀ¸ÁºÀvÀÄ PÁ®WÀlÖ






    PÀ£ÀßqÀ ªÀÄ£À¸ÀÄì ªÀÄvÀÄÛ PÀ£ÀßqÀ aAvÀ£É ªÀ¸ÁºÀvÀÄ PÁ®WÀlÖzÀ°è gÁ¶ÖçÃAiÀÄ ªÀiË®åUÀ¼À §zÀÄPÀ£ÀÄß d£À ¸ÁªÀiÁ£ÀågÀ°è gÀƦ¸À®Ä ¥ÀæAiÀÄwß¹vÀÄ. C®èzÉà gÁµÀÖç-£ÁqÀÄ JA§ ¥ÀjPÀ®à£ÉAiÉÆA¢UÉ d£ÀgÀ°è ¥ÁæzÉòPÀ ªÀÄvÀÄÛ gÁ¶ÖçÃAiÀÄ ¦æÃw ªÀÄvÀÄÛ ¨sÁªÉÊPÀåvÉAiÀÄ£ÀÄß UÀÄgÀÄw¸À¨ÉÃPÉA§ EZÉÑAiÀÄ£ÀÄß PÀ«ªÀÄ£À¸ÀÄìUÀ¼À ªÀÄÆ®PÀ ¸Á»vÀåUÀ¼À°è ¥ÀæZÀÄgÀUÉÆ½¹vÀÄ. ¸Á»vÀå ªÀÄvÀÄÛ d£ÀgÀÄ ¤vÀå fêÀ£ÀzÀ°è §¼À¸ÀĪÀ ¨sÁµÉUÀÆ ªÀåvÁå¸À«zÉ. DzÀgÉ CªÀÅUÀ¼É®èªÀÅ ¨sÁªÀ£ÉAiÀÄ£ÀÄß ºÉÆA¢gÀÄvÀÛzÉ. MAzÀÄ DvÀÄgÀzÀ ªÀiÁvÀÄUÀ¼ÀÄ, ¤zsÁðgÀUÀ¼ÁzÀgÉ E£ÀÄß §gÀªÀtÂUÉAiÀÄ ¨sÁµÉ AiÉÆÃZÀ£É¬ÄAzÀ ¤ªÀð»¸ÀĪÀAvÀºÀzÀÄ. F zÀȶ֬ÄAzÀ ªÀ¸ÁºÀvÀÄ PÁ®WÀlÖ ªÀÄvÀÄÛ PÀ£ÀßqÀ ¥Àj¸ÀgÀ CzsÀåAiÀÄ£ÀPÉÌ §ºÀ¼À «¸ÀÛöÈvÀ «ªÀgÀuÉAiÀÄ£ÀÄß ¤ÃqÀ§®ÄèzÀÄ. UÉÆÃ«AzÀ ¥ÉÊAiÀĪÀgÀ V½«AqÀÄ ¸ÀAPÀ®£ÀzÀ°è 5 ¥ÀzÀåUÀ¼ÀÄ gÁ¶ÖçÃAiÀÄvÉAiÀÄ wgÀļÀ£ÀÄß ºÉÆA¢zÉ. ºÁUÉ C£ÉÃPÀ PÀ«UÀ¼À ¸Á»wPÀ ªÀ¸ÀÄÛ ¸ÁévÀAvÀæ÷å ZÀ¼ÀĪÀ½AiÀiÁVvÀÄÛ. ¤gÀAd£ÀgÀªÀgÀ PÀ¯Áåt ¸Áé«Ä PÁzÀA§j UÀªÀĤ¹zÀgÉ C°è£À ¥Àj¸ÀgÀ ºÁUÀÆ ¸ÁªÀiÁ£Àå£À ºÉÆÃgÁlzÀ QZÀÄÑ PÀgÁªÀ½, PÉÆqÀUÀÄ ¨sÁUÀUÀ¼À°è EvÉÛA§ÄzÀÄ w½AiÀÄÄvÀÛzÉ. EwºÁ¸ÀPÉÌ ºÀwÛgÀªÁzÀ §gÀªÀtÂUÉAiÀÄ®Æè QZÀÄÑ PÁtÄvÀÛzÉ. EzÀÄ F PÁ®zÀ §UÉV£À §gÀªÀtÂUÉAiÀÄ°è ¸ÀºÀdªÁV PÁtĪÀ ®PÀët. DzÀgÀÆ F ªÀÄzsÉå C£ÉÃPÀ ¥Àæ±ÉßUÀ¼ÀÄ £ÀªÀÄä ªÀÄÄAzÉ JzÀÄÝ ¤®ÄèvÀÛzÉ. ªÀ¸ÁºÀvÀÄ PÁ®WÀlÖzÀ°è PÀ£ÀßqÀ ¨sÁµÉAiÀÄ C¹ÛvÀé ªÀÄvÀÄÛ CzÀÄ £ÁlPÀ, ¸Á»vÀå, d£À¥ÀzÀ ªÀÄÄAvÁzÀªÀÅUÀ¼À°è §¼ÀPÉ. CzÀgÀ ¨É¼ÀªÀtÂUÉAiÀİè C£ÉÃPÀ ¥ÀjªÀvÀð£ÉUÀ¼ÀÄ, ¥ÁæzÉòPÀ, ¥ËæqsÀ ªÀÄvÀÄÛ ¸ÁªÀiÁ£Àå ¨sÁµÉAiÀiÁV PÀ£ÀßqÀzÀ §¼ÀPÉ. ªÀ¸ÁºÀvÀÄ µÁ» ªÀåªÀ¸ÉÜAiÀÄ£ÀÄß PÀ£ÀßqÀ ªÀÄ£À¸ÀÄì ªÀÄvÀÄÛ ¨sÁµÉ ¥ÀæwgÉÆÃ¢ü¹zÀ §UÉ, ¥ÀÇgÀPÀ ¸Á»vÀåUÀ¼À ¥ÁvÀæ, EªÉ®èzÀgÀ CzsÀåAiÀÄ£À F ¸ÀAzÀ¨sÀðzÀ°è÷ ªÀÄÄRåªÁVzÉ.
       gÁ¶ÖçÃAiÀÄ ªÀÄlÖzÀ ¸ÁévÀAvÀæ÷å ZÀ¼ÀªÀ½AiÀÄÄ PÀ¼ÉzÀ ±ÀvÀªÀiÁ£ÀzÀ JgÀqÀÄ ªÀÄvÀÄÛ ªÀÄÆgÀ£ÉAiÀÄ zÀ±ÀPÀUÀ¼À (1920-30)gÀ°è §ºÀ¼À ¥ÀæRgÀªÁVvÀÄÛ. F WÀlÖzÀ°è ¸ÀézÉò, C¸ÀºÀPÁgÀ, ºÉÆÃAgÀÆ®Ä, ¸ÀvÁåUÀæºÀ ªÉÆzÀ¯ÁzÀ D±ÀAiÀÄUÀ¼ÀÄ UÁA¢ü CªÀgÀ ¥ÀæªÉñÀ ºÁUÀÆ d£ÀgÀ ¥ÀæwQæAiÉÄUÀ¼ÉÆA¢UÉ ªÀÄÄAzÀĪÀgÉ¢zÀݪÀÅ. F ¸ÀAzÀ¨sÀðzÀ°è ¨sÁgÀwÃAiÀÄ ¥ÁæzÉòPÀ ¨sÁµÉUÀ¼ÀÄ ¸Á»vÀåzÀ ªÀÄÆ®PÀ ºÁUÀÆ vÀªÀÄä vÀªÀÄä gÀAUÀ¨sÀÆ«ÄAiÀÄ ¥ÀæAiÉÆÃUÀUÀ¼À ªÀÄÆ®PÀ ©ænµï DqÀ½vÀ±Á»UÉ §®ªÁzÀ DvÀAPÀUÀ¼À£ÀÄß MrØzÀªÀÅ. EzÀPÉÌ PÀ£ÀßqÀzÀ DzsÀĤPÀ ¥ÀæeÉÕAiÀÄ £ÁlPÀ gÀZÀ£ÀPÁgÀgÀÄ ºÁUÀÆ CªÀgÀ ¥ÀæAiÉÆÃUÀUÀ¼ÀÄ ºÉÆgÀvÁV®è. ¥Á±ÁÑvÀå gÀAUÀ ¥ÀjPÀgÀ ºÁUÀÆ aAvÀ£ÉUÀ¼À£ÀÄß PÀ£ÀßqÀzÀ £ÉÆÃlzÀ°è d£ÀjUÉ vÉÆÃj¹ CzÀ£ÀÄß ªÀåAUÀå ªÀiÁqÀÄwÛzÀÝ ¥ÀæQæAiÉÄUÀ¼ÀÄ £ÀªÀÄä°è EªÉ. F »£É߯ÉAiÀÄ£ÀÄß ºÀĬĮUÉÆÃ¼À £ÁgÁAiÀÄtgÁAiÀÄgÀÄ vÀªÀÄä ²PÀët ¸ÀA¨sÀæªÀÄ £ÁlPÀzÀ°è (1925) EAUÉæÃf (EAVèõï) ²PÀëtzÀ vÀ¥ÀÅöà UÀæ»PÉ, C£ÀÄPÀgÀuÉUÀ½AzÀ zÉñÁ©üªÀiÁ£À ªÀÄvÀÄÛ ¸Áé©üªÀiÁ£ÀªÀ£ÀÄß ªÀÄ£ÀªÀjPÉ ªÀiÁrPÉÆlÖzÀÄÝ M¼ÉîAiÀÄ GzÁºÀgÀuÉ. CªÀgÀÄ £ÉÆÃr¢gÁ F gÁAiÀÄgÀ£Àß JAzÀÄ ¨ÉgÀ¼ÀÄ ªÀiÁr vÉÆÃj¹ -
       ................ D ªÉ¸ÀÖ£ïð ¥Áå±À£Àß (Western Fashion)PÉÌ
       CªÀgÀ CjªÉ CAZÀqÉUÀ¼À£ÀÄß PÉÆAqÀÄPÉÆAqÀÄ gÉÆPÀ̪À£ÀÄß
       PÉÆnÖzÀÝjAzÀ £ÀªÀÄä zÉñÀzÀ §qÀ d£ÀgÀ ¹ÜwAiÀÄÄ
       K£ÁVzÉ? £ÀªÀÄä d£ÀgÀ°è zÉñÁ©üªÀiÁ£ÀªÀÇ
       ºÉÆÃ¬ÄvÀÄ, ¨sÁµÁ©üªÀiÁ£ÀªÀÇ ºÉÆÃ¬ÄvÀÄ. E°è PÉýj
              zÉñÁ©üªÀiÁ£ÀªÀ£ÀÄ ¨sÁµÁ©üªÀiÁ£ÀªÀ£ÀÄ
              ¯ÉøÁV vÀ¼ÉAiÀÄzÀªÀ£À £ÀgÀd£ÀäªÉà §ºÀÄ
              ºÉù PÁtAiÀÄå dUÀzÉÆ¼ÀUÉ ||1||10
J£ÀÄߪÀÅzÀgÀ ªÀÄÆ®PÀ zÉñÀ ªÀÄvÀÄÛ £Ár£À §UÉÎ CjªÀ£ÀÄß, eÁUÀÈwAiÀÄ£ÀÄß vÀgÀĪÀ aAvÀ£É £ÀqɹzÀÝgÀÄ. MqÉzÀÄ ZÀÆgÁVzÀÝ PÀ£ÀßqÀzÀ ¥ÀæzÉñÀUÀ¼À£ÀÄß MlÄÖUÀÆr¸ÀĪÀ aAvÀ£ÉUÉ PÀ¯Á©üªÀÈ¢ÞAiÀÄ CxÀªÁ gÀAUÀ¨sÀÆ«ÄAiÀÄ CªÀ±ÀåPÀvÉ PÁt¹PÉÆ¼Àî¨ÉÃQzÉ JA§ EAVvÀ F ºÀAvÀzÀ°è UÁqsÀªÁV ªÀÄÆr§A¢vÀÄ.
       vÀÄAqÁVzÀÝ PÀ£ÁðlPÀªÀÅ MAzÉà PÀ£ÀßqÀzÀ ¨sÁµÁ ¥ÀæAiÉÆÃUÀªÀ£ÀÄß ºÉÆA¢gÀ°®è. F ªÀiÁvÀÄ §gÀºÀgÀÆ¥ÀzÀ ªÀÄvÀÄÛ ªÀiÁvÀ£ÁqÀĪÀ ¥ÀæQæAiÉÄUÀ¼ÉgÀqÀPÀÆÌ C£Àé¬Ä¸ÀÄvÀÛzÉ. LzÀÄ ¥ÁæzÉòPÀªÁzÀ «AUÀqÀ£ÉUÀ¼À°èzÀÝ PÀ£ÀßrUÀgÀÄ vÀªÀÄäzÉà DzÀ ¨sÁ¶PÀ ¥ÀæAiÉÆÃUÀUÀ¼À£ÀÄß §¼À¸ÀÄwÛzÀÄÝzÀÄ KQÃPÀgÀtzÀ D±ÀAiÀÄPÉÌ ºÉaÑ£À ªÀÄnÖUÉ CrØ DvÀAPÀUÀ¼À£ÀÄß MrØvÀÄÛ. EzÀgÀ eÉÆvÉUÉ G¥À¨sÁµÉUÀ¼À (PÉÆqÀªÀ, PÉÆAPÀtÂ, wUÀ¼À, vÀļÀÄ EvÁå¢) ¥Àæ¨sÁªÀªÀÅ ªÀÄÄRåªÁzÀÄzÀÄ. «¨sÀfvÀ PÀ£ÀßqÀ ¥ÀæzÉñÀUÀ¼À°è PÀ£ÀßrUÀgÀÄ vÉ®ÄUÀÄ, vÀ«Ä¼ÀÄ, ªÀÄgÁp, §AUÁ½, UÀÄdgÁw, ªÀįÉAiÀiÁ¼À, GzÀÄð ªÉÆzÀ¯ÁzÀ ©ü£Àß ¨sÁ¶PÀgÀ ¨sÁµÁ ¥ÀæAiÉÆÃUÀUÀ½AzÀ®Æ ¥Àæ¨sÁ«vÀgÁVzÀÝgÀÄ. Erà EArAiÀiÁªÀ£Éßà MAzÀÄUÀÆr¹zÀÄÝ EAVèÃµï ¨sÁµÉ. DzÀgÉ PÀ£ÀßqÀzÀ ¸ÀAzÀ¨sÀðzÀ°è MAzÀÄUÀÆr¸ÀĪÀ KPÀ jÃwAiÀÄ ¨sÁ¶PÀ ¥ÀæAiÉÆÃUÀUÀ¼À£ÀÄß ºÀÄlÄÖ ºÁPÀĪÀÅzÀÄ ¸ÀÄ®¨sÀzÀ ªÀiÁvÁVgÀ°®è. F §UÉÎ GvÀÛgÀzÀ ªÀÄvÀÄÛ ºÀ¼ÉAiÀÄ ªÉÄʸÀÆj£À ¨sÁµÁ vÀdÕgÀÄ §ºÀ¼ÀµÀÄÖ ±Àæ«Ä¹gÀĪÀ GzÁºÀgÀuÉUÀ¼ÀÄ EªÉ. eÉÆvÉUÉ PÀ£ÁðlPÀ «zÁåªÀzsÀðPÀ ¸ÀAWÀ ºÁUÀÆ PÀ£ÀßqÀ ¸Á»vÀå ¥ÀjµÀvÀÄÛUÀ¼ÀÄ ¸ÀºÀ. MAzÀÄ ¨sÁUÀzÀ d£ÀgÀ PÀ£ÀßqÀ E£ÉÆßAzÀÄ ¨sÁUÀzÀ PÀ£ÀßrUÀjUÉ CxÀðªÁUÀzÉà JµÉÆÖèÁj «qÀA§£ÉUÉ CªÀPÁ±À ªÀiÁrPÉÆqÀÄwÛvÀÄÛ. F «qÀA§£ÉUÀ¼À£Éßà ªÀÄÄRåªÀ£ÁßV¹PÉÆAqÀÄ £ÁlPÀ ¥ÀæAiÉÆÃUÀUÀ¼À°è KQÃPÀgÀtªÁUÀ¨ÉÃPÁzÀ dgÀÆgÀ£ÀÄß CA¢£À £ÁlPÀPÁgÀgÀÄ ªÀiÁrzÁÝgÉ. MAzÉà gÀAUÀ ¥ÀæAiÉÆÃUÀzÀ°è ¨ÉÃgÉ ¨ÉÃgÉ (¥ÁæzÉòPÀ) WÀlPÀUÀ¼À PÀ£ÀßqÀ ¨sÁµÁ ¥ÀæAiÉÆÃUÀUÀ¼À£ÀÄß (¸ÀA¨sÁµÀuÉAiÀÄ£ÀÄß) ºÉuÉzÀÄ ¨sÁ¶PÀ KQÃPÀgÀtªÁUÀ¨ÉÃPÉA§ D±ÀAiÀĪÀ£ÀÄß C©üªÀåQÛ¸À¯ÁVzÉ. CAzÀgÉ PÀ£ÀßrUÀgÀ J®è jÃwAiÀÄ vÁgÀvÀªÀÄåUÀ¼ÀÄ PÀ£ÀßqÀzÀ ªÀÄ£À¸ÀÄìUÀ¼À MAzÀÄUÀÆqÀÄ«PÉAiÉÆA¢UÉ §UɺÀjAiÀÄÄvÀÛªÉ JA§ D±ÀAiÀÄ. F §UÉAiÀÄ ªÉÊZÁjPÀvÉAiÀÄ£ÀÄß «qÀA§£ÉAiÀÄ ªÀÄÆ®PÀ KQÃPÀgÀtzÀ £ÁlPÀzÀ°è ZÉ£ÁßV ªÀÄÆr¹zÀªÀgÀÄ §¼ÁîjAiÀÄ ©Ãa. CªÀjUÉ PÀ£ÀßrUÀgÀÄ ºÉÆgÀV£À ¢é ªÀÄvÀÄÛ §ºÀÄ ¨sÁµÁ vÉÆqÀPÀÄUÀ¼ÀÄ KQÃPÀgÀtPÉÌ vÉÆAzÀgÉ ¤ÃqÀÄwÛªÉ JA§ÄzÀÄ ¸ÀàµÀÖªÁVvÀÄÛ. EzÀ£ÀÄß £ÁlPÀzÀ ªÀÄÆ®PÀªÉà ºÉaÑ£À ªÀÄnÖUÉ §UɺÀj¸À®Ä ¸ÁzsÀå JA§ÄzÀÄ E°è£À D±ÀAiÀÄ. CAzÀgÉ ¨sÁ¶PÀ KQÃPÀgÀt ºÁUÀÆ d£ÀgÀ MAzÀÄUÀÆqÀÄ«PÉ EªÉgÀqÀÄ MmÉÆÖnÖUÉ DUÀ¨ÉÃQzÀÝ ¥ÀæQæAiÉÄUÀ¼ÀÄ. PÀ£ÀßqÀ £ÁlPÀUÀ½AzÀ F ¥ÀæwQæAiÉÄ ªÀåPÀÛ DVzÉ.
       ªÀ¸ÁºÀvÀÄ PÁ®WÀlÖzÀ°è Erà PÀ£ÀßqÀ ¨sÁµÉ ªÀÄvÀÄÛ PÀ£ÀßqÀ ªÀÄ£À¸ÀÄìUÀ¼À aAvÀ£É §ºÀ¼À ªÀÄÄRå. GzÉÝñÀ ªÀÄvÀÄÛ ¸Á¢ü¸ÀĪÀ zÁjUÀ¼ÀÄ ªÀ¸ÁºÀvÀÄ PÁ®WÀlÖzÀ°è §ºÀÄvÉÃPÀ MAzÉà DVvÀÄÛ. CzÀÄ ¸ÁévÀAvÀæ÷å ªÀÄvÀÄÛ KPÀvÉ. DzÀgÉ ¥Àæ¸ÀÄÛvÀªÁV £À«®UÀjAiÀÄ ZÀzÀÄgÀĪÀ ªÀÈvÁÛPÁgÀzÀ §tÚUÀ¼ÀAvÉ PÀ£ÀßqÀ ªÀÄ£À¸ÀÄì ªÀÄvÀÄÛ PÀ£ÀßqÀ ¨sÁµÉAiÀÄ £ÀqÀÄªÉ ¸ÀªÀĸÉåUÀ¼ÀÄ ªÀÄvÀÄÛ ¸ÀªÁ®ÄUÀ¼ÀÄ ¨É¼ÉAiÀÄÄvÁÛ ºÉÆÃUÀÄvÀÛzÉ. CzÀÄ ¨sÁµÉAiÀÄ C¹ÛvÀézÀ ¥Àæ±Éß EgÀ§ºÀÄzÀÄ, §zÀÄPÀÄ PÀnÖPÉÆ¼Àî®Ä GzÉÆåÃUÀzÀ ¥Àæ±Éß, ªÀiÁzsÀåªÀÄzÀ §¼ÀPÉAiÀÄ £ÀqÀÄªÉ ºÉƸÀ vÀ¯ÉªÀiÁj£À DAiÉÄÌAiÀÄ ¥Àæ±ÉßUÀ¼ÀÄ EªÉ®è §ºÀ¼À ¨sÁ¶PÀ «ZÁgÀUÀ¼ÁVªÉ. DzÀgÉ EzÉà PÀ£ÀßqÀ ¨sÁµÉAiÀÄ GUÀªÀÄ, fêÀ£À, ¨sÁµÉAiÀÄ£ÀÄß d£À ¸ÁªÀiÁ£ÀågÀ zÀ¤AiÀiÁV PÀnÖzÀ ¥ÀæQæAiÉÄ, ¥ËæqsÀ ¸Á»vÀåªÁV gÀa¹zÀ §UÉ ºÁUÀÆ ªÀiÁzsÀåªÀĪÁV ªÀ¸ÁºÀvÀÄ PÁ®WÀlÖzÀ ¸ÀAzÀ¨sÀðzÀ°è ©ænõÀgÀ «gÀÄzÀÞ gÁ¶ÖçÃAiÀÄvÉ ªÀÄvÀÄÛ PÀ£ÁðlPÀzÀ KQÃPÀgÀtPÉÌ ¸ÀÆàwð PÉÆnÖgÀĪÀÅzÀÄ §ºÀĪÀÄÄRå ¸ÀAUÀw.
       ªÀ¸ÁºÀvÀÄ PÁ®WÀlÖzÀ°è PÀ£ÀßqÀzÀ d£À fêÀ£À, DqÀĨsÁµÉ, ¸Á»vÀå ¨sÁµÉAiÀiÁV ºÉÃUÉ CzÀÄ ¥Á±ÁÑvÀå ¨sÁµÉ ªÀÄvÀÄÛ ¸ÀA¸ÀÌöÈwVAvÀ §ºÀÄ ¨ÉÃUÀ ¸ÀAªÉÃzÀ£Á²Ã®vÉAiÀÄ£ÀÄß, ¨sÁªÀ£ÉAiÀÄ£ÀÄß PÀnÖPÉÆqÀ®Ä ¸ÁzsÀåªÁ¬ÄvÀÄ? Erà £ÀªÀÄä PÀ£ÀßqÀ ¨sÁµÉAiÀÄ°è ªÀ¸ÁºÀvÀÄ PÁ®WÀlÖzÀ°è DqÀ½vÀ ¨sÁµÉAiÀiÁV EAVèöPÀgÀtUÉÆ½¸ÀĪÀ ¥ÀæAiÀÄvÀß £ÀqɬÄvÀÄ. C®èzÉà ««zsÀ ¥ÁæAvÀæ÷åªÁV PÀ£ÁðlPÀªÀ£ÀÄß «AUÀr¹ KPÀvÉUÉ PÀrªÁt ºÁPÀ¯ÁVvÀÄÛ. ¨sÁµÉAiÀÄ ªÀÈ¢ÞAiÀÄ£ÀÄß ¥ÀǪÀð¤zsÀðjvÀªÁV vÀqÉAiÀÄĪÀ ¥ÀæQæAiÉÄAiÀiÁ¬ÄvÀÄ. EªÀÅUÀ¼É®èzÀgÀ ºÉÆgÀvÁV PÀ£ÀßqÀ ªÀ¸ÁºÀvÀÄ PÁ®WÀlÖzÀ°è ¥ÀæRgÀ ªÀiÁzsÀåªÀĪÁV, d£ÀzÀ¤AiÀiÁV gÁ¶ÖçÃAiÀÄvÉ ªÀÄvÀÄÛ PÀ£ÀßqÀ ¨sÁµÁ ¥ÁæAvÀåUÀ¼À KQÃPÀgÀtPÉÌ §¼ÀPÉAiÀiÁ¬ÄvÀÄ. f.J¸ï.²ªÀgÀÄzÀæ¥Àà£ÀªÀgÀÄ ¸ÀªÀÄUÀæ UÀzÀåzÀ°è gÁ¶ÖçÃAiÀÄvÉ ªÀÄvÀÄÛ G¥ÀgÁ¶ÖçÃAiÀÄvÉ §UÉÎ ªÀiÁvÀ£ÁqÀÄvÁÛgÉ. PÀ£ÁðlPÀvÀé G¥ÀgÁ¶ÖçÃAiÀÄvÉ J£ÀÄßvÁÛgÉ. CAzÀgÉ PÀ£ÀßqÀ ¸Á»vÀåzÀ ¸ÁA¸ÀÌöÈwPÀ PÀ£ÁðlPÀvÀézÀ G¥ÀgÁ¶ÖçÃAiÀÄvÉ ¸ÁA¸ÀÌöÈwPÀ ¨sÁgÀwÃAiÀÄvÉAiÀÄ ªÀÄUÀ¼ÀAvÉ CAzÀÄ PÀAUÉÆ½¹vÀÄ. »ÃUÁV ¸Á»vÀåzÀ ªÀÄÆ®PÀ PÀ« ªÀÄ£ÀUÀ¼ÀÄ KQÃPÀgÀtªÀ£ÀÄß §AiÀĹvÀÄ. gÁdQÃAiÀÄ, ¸ÁA¸ÀÌöÈwPÀ, ¥ÁæzÉòPÀ ºÁUÀÆ E°è£À d£ÀgÀ ¸ÀܽÃAiÀÄ »vÁ¸ÀQÛUÀ¼À ¨ÉÃrPÉUÉ MvÀÛqÀªÀ£ÀÄß vÀgÀĪÀ zÀȶÖAiÀÄ°è ¨sÁµÉAiÀÄ£ÀÄß KQÃPÀgÀtzÀ C¸ÀÛç ªÀiÁqÀ¯Á¬ÄvÀÄ. C®èzÉà ¨sÁµÉ ªÀÄvÀÄÛ E°è£À ¸ÀA¸ÀÌöÈwUÉ EgÀĪÀ ¸ÀA§AzsÀªÀ£ÀÄß ¸Á»vÀåUÀ¼ÀÄ, d£ÀgÀ ¯ÁªÀtÂUÀ¼À°è, UÁzÉ ªÀiÁvÀÄUÀ¼À°è, d£À¥ÀzÀ «ZÁgÀUÀ¼À°è ¸ÉÃj¹PÉÆ¼Àî¯Á¬ÄvÀÄ. EªÉ®èzÀgÀ £ÀqÀÄªÉ PÀ£ÀßqÀ ¨sÁµÉ ªÀiÁzsÀåªÀÄ ªÀiÁvÀæªÀ®è. CzÀÄ DqÀ½vÀ ¨sÁµÉAiÀiÁV, PÀ£ÀßrUÀgÀ D¹ävÉAiÀÄ£ÀÄß G½¸ÀĪÀ ¸ÁzsÀ£ÀªÁV, GzÉÆåÃUÀ ªÀåªÀºÁgÀ »ÃUÉ ºÀ®ªÀÅ gÀAUÀUÀ¼À°è ªÀ¸ÁºÀvÀÄ PÁ®WÀlÖzÀ°è ¸ÀºÀPÁjAiÀiÁ¬ÄvÀÄ.